ಕನ್ನಡ ಸಂಚಯ

ಕನ್ನಡ ಸಂಚಯ ಕನ್ನಡ ಸಮೃದ್ಧ ಸಾಹಿತ್ಯ ಲೋಕವನ್ನು ಸಂಶೋಧಕರಿಗೆ, ಸಾಹಿತ್ಯಾಸಕ್ತರಿಗೆ ತೆರೆದಿಡುವ ಒಂದು ದಿಟ್ಟ ಪ್ರಯತ್ನ. We have dreams to build many more such initiatives.

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು 'ಸಂಚಯ'. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರ್ಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ಪರಿಕರಗಳು ಲಭ್ಯ. ವಚನ ಸಾಹಿತ್ಯದ ಸಂಶೋಧನೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರೂಪಿಸಲಾದ ‘ವಚನ ಸಂಚಯ’ ಈಗ ಬಳಕೆಗೆ ಲಭ್ಯವಿದೆ.

ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಜ್ಞಾನ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

ಸಂಚಯ ತಂಡ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.

‘Sanchaya’ was born with an intent to make an impact in the area of Kannada & Technology. ‘Sanchaya’ is exploring the possibilities of using technology in Linguistics and Literary research. Tools designed and developed by ‘Sanchaya’ is available for the larger community through Internet and Mobile platforms. ‘Vachana Sanchaya’ is a platform built to enable research on Vachana Literature which is already available for public. Projects binding both Literary & Technology Knowledge through our platforms are based on the inspiration of creating atmosphere around Free Information & Free Knowledge through Free Software. Sanchaya is a not for profit platform working around building the technological capacity around Kannada Literary research.

ನಗುವ ನಂದ ವಾರಪತ್ರಿಕೆ ಪತ್ರಿಕೆ ಸಂಚಯ - ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ.         https://naguvan...
20/06/2025

ನಗುವ ನಂದ ವಾರಪತ್ರಿಕೆ ಪತ್ರಿಕೆ ಸಂಚಯ - ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ.



https://naguvananda.sanchaya.net/

fans

21/05/2025

ಬೂಕರ್ ಬಹುಮಾನ ಗೆದ್ದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ಕನ್ನಡದ ಅತ್ಯುತ್ತಮ ಸಾಹಿತ್ಯಕ ಮ್ಯಾಗಜೀನ್‌ಗಳಲ್ಲಿ ಒಂದಾದ ಭಾವನ ಪತ್ರಿಕೆಯ, (ಏಪ್ರಿಲ್ 2000) ಸಂಚಿಕೆಯಲ್ಲಿ ಬಾನು ಮುಷ್ತಾಕ್ ಅವರ ಜನಪ್ರಿಯ ಕಥೆ "ಎದೆಯ ಹಣತೆ" ಪ್ರಕಟವಾಗಿತ್ತು. ಈ ಕಥೆ 2004ರಲ್ಲಿ ಪ್ರಕಟವಾದ ಅವರ ಕಥಾಸಂಕಲನಕ್ಕೂ ಶೀರ್ಷಿಕೆಯಾಗಿತ್ತು.

ಭಾವನ ಸಂಚಿಕೆಗಳನ್ನು ಸಂಚಿಯ ಸಹಭಾಗಿತ್ವದಲ್ಲಿ ಅಡಿ ಡಿಜಿಟಲೀಕರಿಸಲಾಗಿದೆ.

ಈ ಮೂಲ ಕಥೆಯನ್ನು ಈಗ ನೀವು ಇಲ್ಲಿ ಓದಬಹುದು — https://archive.org/details/bhaavanaapril2000000unse/page/116/mode/2up

Address

Bangalore
560011

Alerts

Be the first to know and let us send you an email when ಕನ್ನಡ ಸಂಚಯ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕನ್ನಡ ಸಂಚಯ:

Share