Shikhar Manjunath

Shikhar Manjunath Free consultatiin, Freeeee astrology, numerology, vasthu, mantra reading

March 29-30 please be aware Jai shree ramJai shree Madhav
17/02/2025

March 29-30 please be aware
Jai shree ram
Jai shree Madhav

28/06/2023
13/06/2023

"ಅಸ್ಯ ಶ್ರೀ ವಿಷ್ಣೋಃ ಸಹಸ್ರನಾಮಂ ರುದ್ರಶಾಪ ವಿಮೋಚನಾ ಮಂತ್ರಸ್ಯ ಮಹಾದೇವ ಋಷಿಃ | ಅನುಷ್ಟಪ್ ಛಂದಃ | ಶ್ರೀ ರುದ್ರಾನುಗ್ರಹ ಶಕ್ತಿರ್ದೇವತಾ ಸುರೇಶಃ | ಶರಣಂ ಶರ್ಮೇತಿ ಬೀಜಂ ಅನಂತೋ ಹುತಭುಕ್ ಭೋಕ್ತೇsತಿ ಶಕ್ತಿಃ | ಸುರೇಶ್ವರಾಯೇತಿ ಕೀಲಕಂ | ರುದ್ರಶಾಪ ವಿಮೋಚನೇ ವಿನಿಯೋಗಃ

ಅಂಗನ್ಯಾಸ :
ಓಂ ಕ್ಲೀಂ ಹ್ರಾಂ ಅಂಗುಷ್ಟಾಭ್ಯಾಂ ನಮಃ
ಓಂ ಕ್ಲೀಂ ಹ್ರೀಂ ತರ್ಜನೀಭ್ಯಾಂ ನಮಃ
ಓಂ ಕ್ಲೀಂ ಹ್ರೂಂ ಮಧ್ಯಮಾಭ್ಯಾಂ ನಮಃ
ಓಂ ಕ್ಲೀಂ ಹ್ರೈಂ ಅನಾಮಿಕಾಭ್ಯಾಂ ನಮಃ
ಓಂ ಕ್ಲೀಂ ಹ್ರೌಂ ಕನಿಷ್ಠಿಕಾಭ್ಯಾಂ ನಮಃ
ಓಂ ಕ್ಲೀಂ ಹ್ರಂ ಕರತಲಪೃಷ್ಠಾಭ್ಯಾಂ ನಮಃ

ಹೃದಯನ್ಯಾಸ :

ಓಂ ಕ್ಲೀಂ ಹ್ರಾಂ ಹೃದಯಾಯ ನಮಃ
ಓಂ ಕ್ಲೀಂ ಹ್ರೀಂ ಶಿರಸೇ ಸ್ವಾಹಾ
ಓಂ ಕ್ಲೀಂ ಹ್ರೂಂ ಶಿಖಾಯೈ ವಷಟ್
ಓಂ ಕ್ಲೀಂ ಹ್ರೈಂ ಕವಚಾಯಹೂಂ
ಓಂ ಕ್ಲೀಂ ಹ್ರೌಂ ನೇತ್ರತ್ರಯಾಯವೌಷಟ್
ಓಂ ಕ್ಲೀಂ ಹ್ರಂ ಅಸ್ತ್ರಾಯಫಟ್
ಓಂ ಕ್ಲೀಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ, ಓಂ ಭೂರ್ಭುವಸ್ಸುವರೋಂ ಇತಿ ದಿಗ್ಬಂಧಃ ||
(ಅಂಗನ್ಯಾಸ, ಹೃದಯನ್ಯಾಸ ಮಾಡೋಕೆ ಬರದವರು ಮೇಲಿನ ಮಂತ್ರಗಳನ್ನು ಎರಡು ಬಾರಿ ಹೇಳಿಕೊಳ್ಳಿ, ಸ್ತ್ರೀಯರು ಸಹ 2 ಬಾರಿ ಹೇಳಿಕೊಳ್ಳಿ)

ಧ್ಯಾನಂ :

"ತಮಲಶ್ಯಾಮಲತನುಂ ಪೀತಕೌಶೇಯವಾಸಂ |
ವರ್ಣಮೂರ್ತಿಮಯಂ ದೇವಂ ಧ್ಯಾಯೇನ್ನಾರಾಯಣ ವಿಭುಂ ||"

ಜಪ :
ಓಂ ಕ್ಲೀಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಕ್ಲೀಂ ಓಂ
( ಈ ಜಪ ಮಂತ್ರವನ್ನು 100 ಸಾರಿ ಜಪಿಸಬೇಕು, ತೀರಾ ಅಸಾಧ್ಯವಾದರೆ ೫೪ ಬಾರಿಯಾದರೂ ಜಪಿಸಿ)

ಪ್ರಾರ್ಥನೆ :
"ಶ್ರೀ ವಿಷ್ಣೋ ಸಹಸ್ರನಾಮ ಸ್ತವೋ ರುದ್ರಶಾಪದ್ವಿಮುಕ್ತೋ ಭವ ||"
ಎಂದು ಹೇಳುತ್ತಾ ೩ ಸಲ ಹೇಳಿ "ಕ್ಷೀರಾರ್ಘ್ಯ" ಕೊಡಬೇಕು...

27/03/2023

ಪ್ರ :ಯಾವ ಕೆಲಸ ಮಾಡಬೇಕು ಯಾವುದನ್ನು ಬಿಡಬೇಕು ಎನ್ನುವುದೇ ನನಗೆ ಅರ್ಥವಾಗುವುದಿಲ್ಲ.
ಉ :ಯೋಚನೆ ಮಾಡಬೇಡ. ನಿನಗೆ ಇಷ್ಟವಿರಲಿ ಇಲ್ಲದಿರಲಿ ಈ ಜೀವನದಲ್ಲಿ ಯಾವ ಕೆಲಸ ನಡೆಯಬೇಕೆಂದು ವಿಧಿ ಲಿಖಿತವೋ, ಅದು ನಿನ್ನಿಂದ ಮಾಡಲ್ಪಡುವುದು.

ಭಗವಾನ್ RAMANA MAHARSHI

23/03/2023

ಅಹಂಭರಿತವಾದ ಮನಸ್ಸು ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡು, ಚಿತ್ರಹಿಂಸೆ ಮಾಡುವ ಚಿಂತೆಗಳನ್ನು ಎದುರಿಸಲಾಗದೆ ದುರ್ಬಲವಾಗುತ್ತದೆ. ಅಹಂಮುಕ್ತವಾದ ಮನಸ್ಸು ಸಂತೋಷವಾಗಿರುತ್ತದೆ.

ಶ್ರೀ ರಮಣರ ಉವಾಚ

18/03/2023

ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ.
ಅಸೂಯೆ ಪಡುವವರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ.ಅಹಂಕಾರ ಪಡುವವರಿಗೆ ಸರಿಯಾದ ಸ್ನೇಹಿತರಿರುವುದಿಲ್ಲ. ಅನುಮಾನ ಪಡುವವರಿಗೆ ಸರಿಯಾದ ಜೀವನವೇ ಇರುವುದಿಲ್ಲ.
ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ । ನಾಯಂ ಲೋಕೋSಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ॥೪೦॥
ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ. ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ. ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ.
ಈರ್ಷ್ಯೀ ಘೃಣೀ ತ್ವಸಂತೃಪ್ತಃ ಕ್ರೋಧನೋ ನಿತ್ಯ ಶಂಕಿತಃ।ಪರಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ॥
ಇತರರ ಬಗ್ಗೆ ಅಸೂಯೆ ಇದ್ದರೆ ತನ್ನಲ್ಲಿ ಎಷ್ಟು ಸಂಪತ್ತಿದ್ದರೂ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಇತರರ ಸುಖವನ್ನು ಕಂಡು ಕರುಬುವುದರಲ್ಲೇ ಜೀವನ ಕಳೆದು ಹೋಗುತ್ತದೆ. ಜುಗುಪ್ಸೆ ಹೊಂದಿದವನಿಗೆ ಮುಂದೆಲ್ಲ ಕತ್ತಲಾಗಿಯೇ ಕಾಣಿಸುವುದು. ಮುಂದೊಂದು ದಿನ ನನಗೂ ಸುಖವಿದೆ ಎಂಬ ಆಶಾಭಾವನೆಯಿಲ್ಲದೆ ಅವಿವೇಕದಿಂದ ಇರುವ ಸುಖವನ್ನೂ ಕಳೆದುಕೊಳ್ಳುವನು. ತೃಪ್ತಿ ಇದ್ದರೆ ಅದಕ್ಕಿಂತ ಮಿಗಿಲಾದ ಸುಖವಿಲ್ಲ. ಕಷ್ಟ ಸುಖಗಳು ಜೀವನದಲ್ಲಿ ಇರುವುದೇ. ಅದನ್ನು ಅರಿಯದೆ ಪುರಂದರದಾಸರು ಹೇಳಿದಂತೆ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಇದ್ದರೆ ಇರುವ ಸುಖವನ್ನು ಅನುಭವಿಸುವುದು ಹೇಗೆ ಸಾಧ್ಯ? ಕೋಪವಿದ್ದವನಿಗೆ ವಿವೇಕವಿಲ್ಲ. ಹಿಂದು ಮುಂದು ಯೋಚಿಸದೆ ಮುನ್ನುಗ್ಗಿ ಕಷ್ಟಕ್ಕೊಳಗಾಗುತ್ತಾನೆ. ಕ್ಷಣಕಾಲ ತಾಳ್ಮೆವಹಿಸಿದರೆ ಮುಂದಿರುವ ಅನಾಹುತವನ್ನು ಖಂಡಿತಾ ತಪ್ಪಿಸಬಹುದು. ಸಂಶಯಾತ್ಮಾ ವಿನಶ್ಯತಿ. ಸಂಶಯವಿರುವುದು ಮನಸ್ಸಿನಲ್ಲಿ. ನಂಬಿಕೆಯಿರುವುದು ಅಂತರಾತ್ಮದಲ್ಲಿ. ಅಂತರಾತ್ಮದ ಬೆಳಕಿನಲ್ಲಿ ವಿವೇಚಿಸಿದರೆ ಸಂಶಯ ತಾನಾಗಿಯೇ ನಿವಾರಣೆಯಾಗುತ್ತದೆ. ಭಗವಂತನ ಅನುಗ್ರಹ ದೊರೆಯುತ್ತದೆ. ಅದು ಬಿಟ್ಟು ಎಲ್ಲವನ್ನೂ ಸಂಶಯದಿಂದಲೇ ಕಂಡರೆ ಸುಖವೆಲ್ಲಿಂದ ಸಿಗಬೇಕು? ತಾನು ಸಾಯಬೇಕು, ಸ್ವರ್ಗ ಪಡೆಯಬೇಕು. ಕಷ್ಟ ಪಟ್ಟು ಸಂಪಾದಿಸಿದರೆ ಅದರಿಂದಷ್ಟೇ ಸುಖ. ಇನ್ನೊಬ್ಬರ ಸೊತ್ತಿನಲ್ಲಿ ನಾವೆಷ್ಟು ದಿನ ಸುಖಪಡಬಹುದು? ಆದ್ದರಿಂದ ಈರ್ಷ್ಯೆ ಜುಗುಪ್ಸೆ ಉಳ್ಳವರು, ತೃಪ್ತಿಯಿಲ್ಲದವರು, ಕೋಪಿಗಳು, ಸಂಶಯಾತ್ಮರು,ಪರೋಪಜೀವಿಗಳು ಈ ಆರು ಮಂದಿ ನಿಶ್ಚಯವಾಗಿಯೂ ದುಃಖಭಾಜನರು.
OM SHRI RAMANA MAHARSHI NAMAH
OM SRI GURU RAGHVENDRAYA NAMAHA.

17/03/2023

ಯುವಕನೊಬ್ಬನು ಭಗವಾನರನ್ನು,(Ramana Maharshi) "ಕೈಲಾಸವಿರುವುದೆಲ್ಲಿ?"ಎಂದು ಕೇಳಿದನು. ಅದಕ್ಕೆ ಭಗವಾನರು,"ಓಹೋ!ಕೈಲಾಸವೇ? ನಾವು ಎಲ್ಲಿದ್ದೇವೋ ಕೈಲಾಸವೂ ಅಲ್ಲಿಯೇ ಇದೆ. ಆದರೆ ಮೊದಲು ನಾವು ಎಲ್ಲಿದ್ದೇವೆ ಹೇಳಿ?"ಎಂದರು. ಆತನು "ಅದಲ್ಲ ಸ್ವಾಮಿ!ಈ ಪುರಾಣದಕಥೆಯಲ್ಲಿ ಬಂದಿರುವ ಆ ಕೈಲಾಸವು ನಿಜವಾಗಿ ಇದೆಯೇನು? ಇದ್ದರೆ ಅದೆಲ್ಲಿದೆ? ಕೃಪೆ ಮಾಡಿ ಅದನ್ನು ಸರಿಯಾಗಿ ತಿಳಿಸಬೇಕು "ಎಂದನು. ಅದಕ್ಕೆ ಭಗವಾನರು,"ಈಗತಾನೇ ತಿಳಿಸಿದೆನಲ್ಲ!ನಾವು ಈಗ ಇಲ್ಲಿಗೆ ಬಂದಿದ್ದೇವೆ. ಇಲ್ಲಿಂದ ಬೇರೊಂದು ಜಾಗಕ್ಕೆ ಹೋಗುತ್ತೇವೆ ಇವೆಲ್ಲವೂ ನಿಜವೆಂದಾದರೆ ಅದೂ ನಿಜವೇ. ಅಲ್ಲಿಯೂ ಯಾವುದೋ ಒಂದು ಆಸನದ ಮೇಲೆ ಒಬ್ಬ ಸ್ವಾಮಿಯು ಕುಳಿತುಕೊಂಡಿರುತ್ತಾನೆ. ಸುತ್ತಲೂ ಭಕ್ತರು ಹೀಗೆಯೇ ಕುಳಿತಿರುತ್ತಾರೆ. ಅವರು ಏನಾದರೂ ಹೇಳುತ್ತಿರುತ್ತಾರೆ. ಸುತ್ತಲೂ ಭಕ್ತರು ಹೀಗೆಯೇ ಕೇಳುತ್ತಿರುತ್ತಾರೆ ಎಲ್ಲೆಲ್ಲೂ ಹೀಗೆಯೇ ಇರುತ್ತದೆ. ಶರೀರದ ದೃಷ್ಟಿಯಿಂದ ನೋಡಿದಾಗ ನಾವು ಎಲ್ಲಿದ್ದರೆ ಅಲ್ಲೇ ಕೈಲಾಸ, ವೈಕುಂಠ ಎಲ್ಲವೂ, ನಮಗೆ ಹುಟ್ಟೂ ಇಲ್ಲ, ಬೆಳವಣಿಗೆಯೂ ಇಲ್ಲ, ಸಾವು ಇಲ್ಲ ಮತ್ತು ಯಾವ ಬದಲಾವಣೆಯೂ ಇಲ್ಲ ಎಂದು ಯಾವಾಗ ನಮ್ಮ ಅರಿವಿಗೆ ಬರುತ್ತದೆಯೋ ಆಗ ಇರುವುದೆಲ್ಲಾ ಕೈಲಾಸವೇ "ಎಂದರು. ಆತನು,"ಅದನ್ನು ಯಾವ ರೀತಿಯಾಗಿ ಅರಿಯುವುದು?"ಎಂದು ಪ್ರಶ್ನಿಸಿದನು. ಭಗವಾನರು "ನಾನು ಇದ್ದೇನೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ. ಹುಟ್ಟಿದಾಗಲೂ ನೀನು ಇದ್ದೀಯೆ, ಒಂದು ವರ್ಷದ ಮಗುವಾಗಿದ್ದಾಗಲೂ ನೀನಿದ್ದೇ, ಯುವಕನಗಿರುವಾಗಲೂ ನೀನಿರುವೆ ಮತ್ತು ಮುದುಕನಾದಾಗಲೂ ನೀನಿರುತ್ತೀಯೆ. ಹಾಗಾಗಿ ಶರೀರವು ಬದಲಾವಣೆ ಹೊಂದುತ್ತಿದ್ದರೂ ನೀನು ಮಾತ್ರ ಬದಲಾಗಿಲ್ಲ. ನಿನ್ನ ಅಸ್ತಿತ್ವಕ್ಕೆ ನಾಶವಿಲ್ಲ ಎಂಬುದಕ್ಕೆ ಈ ದೃಷ್ಟಾಂತವೊಂದೇ ಸಾಕು."ಎಂದರು

09/03/2023

ಹಣ ಹೆಚ್ಚಾದಾಗ ಅಹಂಕಾರ ಹೆಚ್ಚಾಗುತ್ತದೆ.ದಾನ ಮಾಡುವುದರಿಂದ ಅಹಂಕಾರ ಕಡಿಮೆ ಆಗುತ್ತದೆ.

06/03/2023

ಒಮ್ಮೆ ಭಕ್ತರೊಬ್ಬರು ಭಗವಾನರ ಹತ್ತಿರ ಸಂನ್ಯಾಯಸಾಶ್ರಮ ಸ್ವೀಕರಿಸಲು ಅನುಮತಿ ಕೇಳುದರು "ಜೀವನದ ಜಂಜಾಟ ಸಾಕಾಯ್ತು ಸ್ವಾಮಿ. ಸಂನ್ಯಾಸಿ ಆಗುತ್ತೇನೆ ಅನುಮತಿ ಕೊಡಿ "ಎಂದರು ಭಗವಾನರು ಒಪ್ಪಿಗೆ ಕೊಡಲಿಲ್ಲ. ಹೀಗೆ ಒಂದೆರಡು ದಿನ ಕಳೆಯಿತು ಕೊನೆಗೊಂದು ದಿನ ಭಕ್ತರು ಕೇಳಿದರು "ನೀವು ಮನೆ ಬಿಟ್ಟು ಬಂದಿರಿ. ಸಂನ್ಯಾಸಿಯಾದಿರಿ. ನಮಗೆ ಮಾತ್ರ ಬೇಡ ಎನ್ನುತ್ತೀರಾ "
ಭಗವಾನರು ಶಾಂತವಾಗಿ ಹೇಳಿದರು "ಹೌದು ನಾನು ಬಂದೆ. ಬರುವಾಗ ನಾನು ಯಾರ ಅನುಮತಿಯೂ ಕೇಳಲಿಲ್ಲವಲ್ಲ ". ಎಂದು ನೆಗೆಯಾಡಿದರು.

05/03/2023

ಸಂದರ್ಶಕ : ಮಹರ್ಷಿಗಳೇ, ತಾವು ದೇವರನ್ನು ನೋಡಿದ್ದೀರಾ?
ಮ :ನೋಡಲು ಏಕೆ ಬಯಸುತ್ತೀರಿ
ಸಂ : ತಾವು ದೇವರನ್ನು ಕಂಡಿದ್ದರೆ ನಾನೂ ಅವನನ್ನು ಕಾಣಲು ಸಹಾಯಮಾಡಿ.
ಮ :'ನಾನು ದೇವರನ್ನು ಕಾಣಬಯಸುತ್ತೇನೆ 'ಎಂದಿರಿ ನೀವು ಯಾರೆಂದು ಮೊದಲು ಹೇಳಿ.
ಸಂ : ನನ್ನ ಹೆಸರು ದೇವದತ್ತ ಶರ್ಮಾ.
ಮ :ಅದು ನಿಮ್ಮ ಹೆಸರು. ನೀವು ಯಾರು ಹೇಳಿ?
ಸಂ : ನಾನು ಶರ್ಮಾ ಎಂದು ಆಗಲೇ ಹೇಳಿದೆ. ನಾನು ಬ್ರಾಹ್ಮಣ.
ಮ :ಅದು ನಿಮ್ಮ ಜಾತಿ, ಅಷ್ಟೇ. ನೀವು ಯಾರು?
ಸಂ :ನಾನು ಕಾಲೇಜಿನ ಉಪನ್ಯಾಸಕ.
ಮ : ಅದು ನಿಮ್ಮ ಉದ್ಯೋಗ. ಆದರೆ ನೀವು ಯಾರು?
ಸಂ : ನಾನೊಬ್ಬ ಮನುಷ್ಯ.
ಮ : ಅದು ನಿಮ್ಮ ಜನ್ಮವಾಯಿತು. ನೀವು ಯಾರು?
ಸಂ : ನಾನು ಗಂಡಸು.
ಮ : ಅದು ನಿಮ್ಮ ಲಿಂಗವಾಯಿತು. ದೇವರನ್ನು ನೋಡಲು ಬಯಸುತ್ತಿರುವುದು ಯಾರು ಎಂದು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕಾದರೆ ನೀವು ಯಾರು, ದೇವರನ್ನು ತಿಳಿಯಬಯಸುವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಲ್ಲವೇ?
ಭಗವಾನರು ಸಂದರ್ಶಕರನ್ನು ನಿಜದ ನೆಲೆಗೆ ಕರೆದೊಯ್ಯುತ್ತಿದ್ದ ರೀತಿ ಇದು. ಮುಂದಿನ ಕ್ರಿಯೆಯನ್ನು ಸಾಧಕನೇ ಮುಂದುವರಿಸಬೇಕಾಗುತ್ತದೆ. ಶೋಧನಾಗ್ನಿಯ ಕಿಡಿ ಹೊತ್ತಿಸಿ ಬೆಳಕು ಕಾಣಲು ಪ್ರಚೋದಿಸುವುದು ಮಹರ್ಷಿಗಳ ವಿಧಾನ.

04/03/2023

#ಮಹರ್ಷಿ ಮತ್ತು #ರಾಜರ್ಷಿ ( ಪ್ರತಿಯೊಬ್ಬರೂ ಒದಲೇಬೇಕಾದ ಲೇಖನ )..

ಭಗವಾನ್ ರಮಣರ ಮತ್ತು ನಾಲ್ವಡಿಯವರ ಈ ಭೇಟಿಯು ಮಹರ್ಷಿ ಮತ್ತು ರಾಜನಿಗೆ ಇರಬೇಕಾದ ವಿನಯ, ಬದ್ದತೆಗಳನ್ನು ನಮಗೆ ತೋರಿಸುತ್ತಿದೆ. ಈ ಉಪಖಂಡದಲ್ಲಿ #ರಾಜಕಾರಣ, #ಆಧ್ಯಾತ್ಮಗಳು ಸಾವಿರಾರು ವರ್ಷಗಳಿಂದ ಜೊತೆಯಲ್ಲಿ ಸಾಗಿಬಂದಿವೆ. ಆದ್ರೆ ಧಾರ್ಮಿಕ ಅಂಧಃ ಶ್ರದ್ದೆಯು ಇಂತಹ ಒಡನಾಟವನ್ನು ವಿಚ್ಛಿದ್ರಕಾರಿಯಾಗಿ ಒಡೆದುಹಾಕಿದೆ.‌ ಜಾಗತೀಕರಣೋತ್ತರ ಕಾಲದಲ್ಲಿ ಇಂದಿಗೊಪ್ಪುವ ಹಾಗೆ ನಾವು ಪುನರ್ನಿರ್ಮಿಸಿಕೊಳ್ಳಬೇಕಿದೆ....

ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರು 1937 ರಲ್ಲಿ ರಮಣ ಮಹರ್ಷಿಗಳ ದರ್ಶನಕ್ಕಾಗಿ ತಿರುವಣ್ಣಾಮಲೈ ಗೆ ಹೋಗಿದ್ದರು. ತಮ್ಮ ಜೊತೆಗೆ ಹಲವಾರು ಉಡುಗೊರೆಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಮಾಡಿದ ಸಿಹಿ ತಿಂಡಿಗಳನ್ನು‌ ಒಯ್ದಿದ್ದರು. ಒಡೆಯರು ತಮ್ಮ ಕಾರನ್ನು ಆಶ್ರಮದಿಂದ ದೂರದಲ್ಲೇ ನಿಲ್ಲಿಸಲು ಹೇಳಿದಾಗ 'ಕಾರು ಆಶ್ರಮದ ಬಾಗಿಲಿಗೆ ಹೋಗುತ್ತದೆ' ಎಂದಿದ್ದಾರೆ ಸೇವಕರು. ಆಗ 'ಮಹರ್ಷಿ ಅವರ ದರ್ಶನಕ್ಕೆ ಹೋಗುವಾಗ ನಡೆದೇ ಹೋಗಬೇಕು' ಎಂದರಂತೆ ಒಡೆಯರು.‌

ಅದೇ ರೀತಿ ಆಶ್ರಮದಿಂದ ಒಂದು ಫಾರ್ಲಾಂಗ್ ದೂರದ ಅಗ್ನಿ ತೀರ್ಥದ ಬಳಿ ಕಾರನ್ನು ನಿಲ್ಲಿಸಿ ಒಡೆಯರು ಮತ್ತವರ ಪರಿವಾರ ಆಶ್ರಮಕ್ಕೆ ನಡೆದು ಸಾಗಿ, ಮಹರ್ಷಿಯವರನ್ನು ಖಾಸಗಿಯಾಗಿ ಕಾಣಬೇಕಂದು ಒಡೆಯರು ಇಚ್ಚಿಸಿದರು. ಆದ್ರೆ ರಮಣರ ಆಶ್ರಮದಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಯಾರೊಬ್ಬರು ಬೇಕಾದರೂ ಆಶ್ರಮದ ಹಳೆಯ ಅವರಣದಲ್ಲಿ ಹೋಗಿ ಕೂತು ರಮಣರನ್ನು ಕಂಡು ಬರಬಹುದಿತ್ತು ಅಷ್ಟೇ! ವಿಶೇಷ ದರ್ಶನ/ ಖಾಸಗಿ ದರ್ಶನಗಳ ಪರಿಪಾಟವೇ ಇರಲಿಲ್ಲ.
ಆದ್ರೆ ಒಡೆಯರು ಅಪೇಕ್ಷಿಸಿದ್ದರಿಂದ ರಮಣರು ಒಪ್ಪಿಗೆ ಸೂಚಿಸಿ ಅವರ ಸ್ನಾನದ ಕೋಣೆಯಲ್ಲಿ ಭೇಟಿ ಮಾಡಲು ಹೇಳಿದರು. ಯಾಕಂದರೆ ರಮಣರು ಖಾಸಗಿಯಾಗಿ, ಒಬ್ಬಂಟಿಯಾಗಿ ಸಿಗಲು ಸಾಧ್ಯವಿರುವುದು ಅಲ್ಲಿ ಮಾತ್ರ. ಒಡೆಯರು ಸ್ನಾನದ ಕೋಣೆಗೆ ಒಬ್ಬರೇ ಹೋಗಿ ರಮಣರನ್ನು‌ ಕಂಡು ಅವರ ಪಾದಗಳಿಗೆ ಎರಗಿ '' ಜನರು ನನ್ನನ್ನು ರಾಜನನ್ನಾಗಿ ಮಾಡಿದ್ದಾರೆ, ಆ ಕಾರಣವಾಗಿ ನಾನಿಂದು ನಿಮ್ಮ ಪಾದತಲದಲ್ಲಿದ್ದು ಸೇವೆಗೈಯುತ್ತಿದ್ದೇನೆ. ಇದು ನನ್ನ ಪುಣ್ಯ.‌ ಬಹುಶಃ ಇದು ನನ್ನ‌ ಮೊದಲ ಮತ್ತು ಕೊನೆಯ ದರ್ಶ‌ನ ಭಾಗ್ಯ.. ಎಲ್ಲ ವಿಚಾರವಾಗಿಯೂ ಎನ್ನನು ಅನುಗ್ರಹಿಸರಿ'' ಎಂದು ಹೇಳುವಾಗ ಕಣ್ಣೀರು ರಮಣರ ಪಾದವನ್ನು ತೋಯಿಸಿತಂತೆ.
ಕೆಲ ಸಮಯದ ನಂತರ ಒಡೆಯರು ರಮಣಾಶ್ರಮದಿಂದ ಬೀಳ್ಗೊಂಡು ವಾಪಾಸಾದರು.‌

ನಂತರ ಆಶ್ರಮದ ಹಳೇ ಆವರಣಕ್ಕೆ ಬಂದ ರಮಣರು, ಸಭೆಯನ್ನುದ್ದೇಶಿಸಿ "ஒரு மஹாராஜா, அவருக்கு உள்ள இவ்வளவு இருக்கு, பழுத்த பழம்".
( ರಾಜನಾಗಿದ್ದರೂ ಆತನಲ್ಲಿ ಎಂತಹ ಆಳದ ಅರಿವಿದೆ. ಆತನೊಂದು ಮಾಗಿದ ಹಣ್ಣು.) ಎಂದರಂತೆ!

ಈ ಲೇಖನದ ಒಳ ಅರ್ಥವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು... ಅಂತಹ ರಾಜರಿಗೇ ಎಂಥಹ ಸಂಸ್ಕೃತಿ ಸಂಸ್ಕಾರ ಗೌರವ ಎಷ್ಟಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು... ಪ್ರತಿಯೊಬ್ಬರೂ ನಾನು ನನ್ನದು ಎಂಬ ಅಹಂ ಅನ್ನು ಬಿಟ್ಟು ಮಾಗಿದ ಹಣ್ಣಾಗಬೇಕು....

( ಒಡೆಯರ್ ರವರು 1937 ರಲ್ಲಿ ರಮಣರ ಬಳಿ ಅವರಿಬ್ಬರ ನಡುವಿನ ಈ ಮಾತು ಬಹಳ ದುಃಖದ ಮಾತು.. ಇದು ನನ್ನ ಪುಣ್ಯ.‌ ಬಹುಶಃ ಇದು ನನ್ನ‌ ಮೊದಲ ಮತ್ತು ಕೊನೆಯ ದರ್ಶ‌ನ ಭಾಗ್ಯ... 3 August 1940 ರಂದು ಮರಣರಾದರು... ) ರಾಜ್ಯಕ್ಕೆ ಒಡೆಯರ್ ರವರ ಕೊಡುಗೆ ಅಪಾರವಾದದ್ದು....

🕉JAGADGURU VANI ಜಗದ್ಗುರು ವಾಣಿ🕉

Address

Bangalore
560002

Telephone

+919611173533

Website

Alerts

Be the first to know and let us send you an email when Shikhar Manjunath posts news and promotions. Your email address will not be used for any other purpose, and you can unsubscribe at any time.

Share