22/04/2026
ತೆರೆದ ಬಾವಿಗಳು
ಅಂತರ್ಜಲವನ್ನು ಬಳಸಲು ತೋಡಲಾದ ಸಾಂಪ್ರದಾಯಿಕ ಜಲಮೂಲವಾಗಿದೆ. ಶುದ್ದ ಮತ್ತು ಸಿಹಿನೀರು ಸಿಗುವ, ಹೆಚ್ಚು ಆಳವಿಲ್ಲದ ಬರಗಾಲದಲ್ಲಿಯೂ ಬತ್ತಿ ಹೋಗದೆ ನೀರು ನೀಡುವ ಬಾವಿಗಳು, ಮಳೆನೀರು ಮತ್ತು ಒಳಹರಿವಿನಿಂದ ಪುನರ್ಭರ್ತಿಯಾಗುತ್ತವೆ. ಈ ನೀರನ್ನು ಕುಡಿಯಲು, ಅಡುಗೆಗೆ ಮತ್ತು ಕೃಷಿಗೆ ಬಳಸಲಾಗುತ್ತದೆ. ಹಿಂದೆಲ್ಲಾ ಊರಿಗೊಂದು ಬಾವಿ ಇರುತ್ತಿದ್ದವು. ಮುಂಜಾನೆ ಮತ್ತು ಮುಸ್ಸಂಜೆ ಮಹಿಳೆಯರು ಒಟ್ಟಾಗಿ ಸೇರುವ ಜಾಗ ಬಾವಿ ಕಟ್ಟೆ. ಬಾವಿಗೆ ಬಿಂದಿಗೆ ಇಳಿವಿಟ್ಟು ನೀರು ಸೇದಿ ಮನೆ ಬಳಕೆಗೆ ಬೇಕಾಗುವಷ್ಟು ಸಂಗ್ರಹಿಸುತ್ತಿದ್ದದ್ದು ಸಾಮಾನ್ಯ. ಹಾಗಾಗಿ ನೀರಿನ ಬಳಕೆ ಹಿತಮಿತವಾಗಿ ಆಗುತ್ತಿತ್ತು. ಈಗ ನಲ್ಲಿ ನೀರು ಬಂದು ನೀರಿನ ಮಹತ್ವ ಮರೆಯಾಗಿದೆ.