DigiKannada

Directions Website Contact the business

DigiKannada DiGiKannada.Com Page. Tech, Health, Science news in Kannada | ಕನ್ನಡದಲ್ಲಿ ಟೆಕ್, ವಿಜ್ಞಾನ, ಆರೋಗ್ಯ ಮಾಹಿತಿ | ತಂತ್ರಜ್ಞಾನ ಟಿಪ್ಸ್, ಸಲಹೆಗಳು ಮತ್ತು ರಿವ್ಯೂಗಳು.

🔥 ವೇದ ಮಂತ್ರಗಳಿಂದ ನೇರವಾಗಿ ರಾಕೆಟ್ ಸೈನ್ಸ್ ವರೆಗೆ! ಗುರುಕುಲದಲ್ಲಿ ಕಲಿತ ಹುಡುಗ, ಆಳ್ವಾಸ್ ವಿದ್ಯಾರ್ಥಿ ಇಸ್ರೋ ವಿಜ್ಞಾನಿಯಾದ ರೋಚಕ ಕಥೆ! 🚀ಮ...
14/09/2026

🔥 ವೇದ ಮಂತ್ರಗಳಿಂದ ನೇರವಾಗಿ ರಾಕೆಟ್ ಸೈನ್ಸ್ ವರೆಗೆ! ಗುರುಕುಲದಲ್ಲಿ ಕಲಿತ ಹುಡುಗ, ಆಳ್ವಾಸ್ ವಿದ್ಯಾರ್ಥಿ ಇಸ್ರೋ ವಿಜ್ಞಾನಿಯಾದ ರೋಚಕ ಕಥೆ! 🚀

ಮೊಬೈಲ್, ಲ್ಯಾಪ್‌ಟಾಪ್ ಮುಟ್ಟದೆ, ಕೇವಲ ಕಿವಿಯಾರೆ ಕೇಳಿ ವೇದಗಳನ್ನು ಕಂಠಪಾಠ ಮಾಡಿದ ಹುಡುಗ ಇಂದು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ವಿಜ್ಞಾನಿ! 🌟

ಭಾರತೀಯ ಸಂಪ್ರದಾಯ ಬೇರೆ, ವಿಜ್ಞಾನ ಬೇರೆ ಅಂತ ವಾದಿಸುವವರಿಗೆ ಈ ಯುವಕನ ಪಯಣ ಕಣ್ಣು ತೆರೆಸುವಂತಿದೆ. ಬೆಳಗ್ಗೆ ಗುರುಕುಲದಲ್ಲಿ ಮಂತ್ರ ಘೋಷ, ಮಧ್ಯಾಹ್ನ ಜೆಇಇ (JEE) ಕಠಿಣ ಸಿದ್ಧತೆ—ಕೇರಳದ ಕಣ್ಣೂರಿನ ಗೋವಿಂದ ಕೃಷ್ಣನ್ ಎಂ. ಸಾಧಿಸಿದ ಈ ಅದ್ಭುತ ಯಶಸ್ಸಿನ ಹಿಂದಿನ ಅತಿಶಿಸ್ತಿನ ರಹಸ್ಯವೇನು?

ಗುರುಕುಲದ ದಿನಚರಿ ಹೇಗಿರುತ್ತೆ ಗೊತ್ತಾ? ಉಚಿತ ಶಿಕ್ಷಣ ನೀಡುವ ಆ ಪವಿತ್ರ ಜಾಗದ ಅತಿ ಅಪರೂಪದ ವಿವರಗಳಿಗಾಗಿ ಸಂಪೂರ್ಣ ಲೇಖನ ಓದಿ 👇

ISRO Scientist: ಶಿಸ್ತಿನಿಂದ ವೇದಾಧ್ಯಯನ ನಡೆಸಿ ಸಂಸ್ಕಾರ ಪಡೆಯುತ್ತಲೇ ವಿಜ್ಞಾನದಲ್ಲೂ ಸಾಧನೆ ಮಾಡಿ ಇಸ್ರೋಗೆ ನೆಗೆದ ವಿದ್ಯಾರ್ಥಿಯ ಸ್ಫೂರ್...

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳುಗಣಪತಿಯು ನಿಮ್ಮೆಲ್ಲರಿಗೂ ಸಂಪದವೀಯಲಿ💥🌷🌞DiGiKannada.Com: ಟೆಕ್, ಆರೋಗ್ಯ - ವಿಶ್ವಾಸಾರ್ಹ ...
14/09/2026

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಗಣಪತಿಯು ನಿಮ್ಮೆಲ್ಲರಿಗೂ ಸಂಪದವೀಯಲಿ
💥🌷🌞
DiGiKannada.Com: ಟೆಕ್, ಆರೋಗ್ಯ - ವಿಶ್ವಾಸಾರ್ಹ ಮಾಹಿತಿ.
ನಮ್ಮ ಬಳಗ ಸೇರಿಕೊಳ್ಳಿ,

13/09/2026

"My Feed, My Choice!" — ಸೋಷಿಯಲ್ ಮೀಡಿಯಾ ಅಲ್ಗಾರಿದಮ್‌ಗೆ ಕೊನೆಗೂ ಬ್ರೇಕ್? 🛑🧠

ನಾವು ಸೋಷಿಯಲ್ ಮೀಡಿಯಾ ಆ್ಯಪ್ ಓಪನ್ ಮಾಡಿದರೆ ಸಾಕು, ನಮ್ಮ ಆಸಕ್ತಿಗೆ ತಕ್ಕಂತೆ ಗಂಟೆಗಟ್ಟಲೆ ಸ್ಕ್ರಾಲ್ ಮಾಡುವಂತೆ ಮಾಡುವ "ಆಲ್ಗಾರಿದಮ್‌"ಗಳ ಕಥೆ ಮುಗಿಯಿತಾ?

ಆಸ್ಟ್ರೇಲಿಯಾ ಸರ್ಕಾರ ತಂದಿರುವ ಹೊಸ ಕಾಯ್ದೆಯ ಪ್ರಕಾರ, ಬಳಕೆದಾರರು ಅಲ್ಗಾರಿದಮ್ ಬೇಡ ಎಂದರೆ ಅದನ್ನು ಆಫ್ (Opt-Out) ಮಾಡಬಹುದು. ನಿಯಮ ಮೀರಿದರೆ ಬಿಗ್ ಟೆಕ್ ಕಂಪನಿಗಳಿಗೆ ₹650+ ಕೋಟಿ ದಂಡ!

ವಿಶ್ವದ ಅತಿದೊಡ್ಡ ಸೋಷಿಯಲ್ ಮೀಡಿಯಾ ಮಾರುಕಟ್ಟೆಯಾದ ಭಾರತದಲ್ಲೂ ಈ ನಿಯಮ ಜಾರಿಯಾದರೆ ಡಿಜಿಟಲ್ ಲೋಕ ಹೇಗಿರಲಿದೆ? ಅಲ್ಗಾರಿದಮ್ ಹೇಗೆ ಕೆಲಸ ಮಾಡುತ್ತೆ?

ಸಂಪೂರ್ಣ ವಿಶ್ಲೇಷಣೆಯನ್ನು ಇಲ್ಲಿ ಓದಿ 👇
DiGiKannada. Com: ಟೆಕ್, ಆರೋಗ್ಯ - ವಿಶ್ವಾಸಾರ್ಹ ಮಾಹಿತಿ.
ಬನ್ನಿ ನಮ್ಮ ಬಳಗ ಸೇರಿಕೊಳ್ಳಿ, ಪ್ರೋತ್ಸಾಹಿಸಿ.

ನನ್ನ ಫೀಡ್ ನನ್ನ ಆಯ್ಕೆ: Australia New Law for Social Media; ಭಾರತದಲ್ಲಿಯೂ ಬರಬಹುದೇ?Australia New Law for Social Media: ಮಕ್ಕಳ ...
13/09/2026

ನನ್ನ ಫೀಡ್ ನನ್ನ ಆಯ್ಕೆ: Australia New Law for Social Media; ಭಾರತದಲ್ಲಿಯೂ ಬರಬಹುದೇ?

Australia New Law for Social Media: ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಏಟು ನೀಡುವ ರೀಲ್ಸ್ ಗೀಳು ತಡೆಗೊಂದು ಕ್ರಮ. ಭಾರತದಲ್ಲಿ ಯಾವಾಗ?...

Australia New Law for Social Media: ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಏಟು ನೀಡುವ ರೀಲ್ಸ್ ಗೀಳು ತಡೆಗೊಂದು ಕ್ರಮ. ಭಾರತದಲ್ಲಿ ಯಾವಾಗ?

ಲಾವಾ ಕರ್ವ್‌ಗೆ ಜೈ ಅನ್ನಿರಿ! Lava Virat Curve 5G ಸೆ.21ರಂದು ಬಿಡುಗಡೆLava Virat Curve 5G: ದೇಶೀ ಮೊಬೈಲ್ ಉತ್ಪಾದಕ ಸಂಸ್ಥೆ ಲಾವಾದಿಂದ,...
13/09/2026

ಲಾವಾ ಕರ್ವ್‌ಗೆ ಜೈ ಅನ್ನಿರಿ! Lava Virat Curve 5G ಸೆ.21ರಂದು ಬಿಡುಗಡೆ

Lava Virat Curve 5G: ದೇಶೀ ಮೊಬೈಲ್ ಉತ್ಪಾದಕ ಸಂಸ್ಥೆ ಲಾವಾದಿಂದ, ಕಡಿಮೆ ಬೆಲೆಗೆ ಅತ್ಯಾಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳ ಫೋನ್...

Lava Virat Curve 5G: ದೇಶೀ ಮೊಬೈಲ್ ಉತ್ಪಾದಕ ಸಂಸ್ಥೆ ಲಾವಾದಿಂದ, ಕಡಿಮೆ ಬೆಲೆಗೆ ಅತ್ಯಾಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳ ಫೋನ್

ಜಸ್ಟ್ ತಗೊಳ್ಳೋದಲ್ಲ, ಕೊಟ್ಟುಬಿಡಿ!Fujifilm Instax Mini 13 Camera Review: ಫೋಟೋ ತೆಗೆದು ಅಲ್ಲೇ ಚಿತ್ರ ಮುದ್ರಿಸಿ ಸ್ನೇಹಿತರಿಗೆ ಗಿಫ್ಟ್...
13/09/2026

ಜಸ್ಟ್ ತಗೊಳ್ಳೋದಲ್ಲ, ಕೊಟ್ಟುಬಿಡಿ!

Fujifilm Instax Mini 13 Camera Review: ಫೋಟೋ ತೆಗೆದು ಅಲ್ಲೇ ಚಿತ್ರ ಮುದ್ರಿಸಿ ಸ್ನೇಹಿತರಿಗೆ ಗಿಫ್ಟ್ ಕೊಡಿ. ಮದುವೆ, ಪಾರ್ಟಿ, ಪ್ರವಾಸದಲ್ಲಿರುವಾಗ ಆ ಕ್ಷಣದಲ್ಲೇ ಗಿಫ್ಟ್ ಕೊಟ್ಟು ಮಧುರ ಕ್ಷಣಗಳ ಖುಷಿಯಲ್ಲಿ ಭಾಗಿಯಾಗಿ...

ಈ ಸಾಧನಕ್ಕೆ ಫ್ಯೂಜಿಫಿಲ್ಮ್ ಕಂಪನಿಯ ಘೋಷಾ ವಾಕ್ಯವೇ Don't Just Take, Give!

12/09/2026

JP Nair ಬರಹ

➡️ನೆನ್ನೆ, ಮೊನ್ನೆ ಇಂದ ಎಐ ಫೋಟೋಗಳಲ್ಲಿ 80ರ ದಶಕದ ಸ್ಟೈಲ್ ನೋಡಿ ಲೈಕ್ ಹೊಡಿತಿದ್ದೀರಲ್ಲ... ಆ ಕಾಲದವರ ಒರಿಜಿನಲ್ ಸ್ಟೈಲ್, ಅವರ ಬದುಕು ಹೇಗಿತ್ತು ಗೊತ್ತಾ? ಟೈಮ್ ಬೆಳಗ್ಗೆ ನಾಲ್ಕು ಗಂಟೆ. ಮೊಬೈಲ್ ಅಲಾರಂ ಇರಲಿಲ್ಲ, ಆ ಹುಂಜ ಕೂಗಿದ್ದೇ ನಮಗೆ ಅಲಾರಂ. ಹೊದ್ದುಕೊಂಡಿದ್ದ ಗೋಣಿಚೀಲದ ರಗ್ಗು ತೆಗೆದರೆ ಎಲುಬು ಕೊರೆಯೋ ಚಳಿ. ಹಟ್ಟೀಲಿ ಹಸುಗಳ ಹಾಲು ಕರೆಯೋ 'ಚುರ್ ಚುರ್' ಸದ್ದು. ಅಮ್ಮ ಅಂಗಳ ಗುಡಿಸಿ, ಬಿಸಿ ಬಿಸಿ ಸಗಣಿ ಸಾರಿಸಿ, ಬಿಳಿ ರಂಗೋಲಿ ಬಿಡ್ತಾ ಇದ್ರೆ ನಮಗೆ ಮೈ ನಡುಗುತ್ತಿತ್ತು. ಬಾವಿಯಿಂದ ನೀರು ಸೇದಿ ಕೊಡದಲ್ಲಿ ತರೋದು ಅಂದ್ರೆ ಜೀವ ಬಾಯಿಗೆ ಬರ್ತಿತ್ತು. ಅಡಿಕೆ, ತೆಂಗಿನ ಗರಿ ಹಾಕಿ ಕಟ್ಟಿಗೆ ಒಲೆಗೆ ಬೆಂಕಿ ಊದಿದ್ರೆ ಇಡೀ ಮನೆ ಹೊಗೆ ಹೊಗೆ. ಅಮ್ಮಿಕಲ್ಲು, ಒರಳು ಕಲ್ಲಿನಲ್ಲಿ ರಾಗಿ, ಅಕ್ಕಿ ಹಿಟ್ಟು ರುಬ್ಬೋ 'ಗುರ್ ಗುರ್' ಸದ್ದು ಮನೆಯಲ್ಲೆಲ್ಲಾ ಪ್ರತಿಧ್ವನಿಸ್ತಿತ್ತು. ರೇಡಿಯೋ ಆನ್ ಮಾಡಿ ಸ್ವಲ್ಪ ಹೊತ್ತು 'ಚುರ್ ಚುರ್' ಸದ್ದು ಬಂದು, ಇದು ಆಕಾಶವಾಣಿ... ಬೆಂಗಳೂರು... ಕೇಂದ್ರದಿಂದ ಮಧ್ಯಮ ಅಲೆಗಳ ಆರು ನೂರ ಹನ್ನೆರಡು ಕಿಲೋಹರ್ಟ್ಸ್ ಅಲೆಗಳ ಮೇಲಿನ ಪ್ರಸಾರ, ಆಮೇಲೆ ಸಿಗ್ನಲ್ ಸೆಟ್ ಆದ ತಕ್ಷಣ ಕೇಳಿಸುತ್ತಿದ್ದ ಆ ನಾಡಗೀತೆ.... ಅಮ್ಮ ಒಲೆ ಮುಂದೆ ಅಡುಗೆ ಮಾಡ್ತಿರೋವಾಗ, ಆ ರೇಡಿಯೋದಲ್ಲಿ ಬರ್ತಿದ್ದ ಭಕ್ತಿಗೀತೆಗಳು, ಸುದ್ದಿ, ಆಮೇಲೆ ಕೃಷಿ ರಂಗದ ಕಾರ್ಯಕ್ರಮಗಳು ಇಡೀ ಮನೆಗೆ ಜೀವ ತುಂಬ್ತಿದ್ವು.

➡️ಬೆಳಗ್ಗೆ ಎದ್ದು ಗಡಿಬಿಡೀಲಿ ಗಂಜಿ ಕುಡಿದು, ಅಜ್ಜಿ ಹೊಲಿದುಕೊಟ್ಟ ಆ ಬಟ್ಟೆಯ ಚೀಲ ಹೆಗಲಿಗೇರಿಸಿಕೊಂಡು ಹೊರಟ್ರೆ ಮುಗೀತು. ಈಗಿನ ಥರ ಬ್ರಾಂಡೆಡ್ ವಾಟರ್ ಬಾಟಲ್ ಇರಲಿಲ್ಲ. ಆ ಕೊರೆಯೋ ಚಳಿ, ಮಂಜು, ಮಳೇಲಿ ಮೈಗೆ ಒಂದು ಪ್ಲಾಸ್ಟಿಕ್ ಚೀಲ ಇಲ್ಲ ಅಡಿಕೆ ಹಾಳೆಯ ಗೊರಬೆ ಹೊದ್ದುಕೊಂಡು ಹೊರಡುತ್ತಿದ್ದೆವು. ಕಾಲಲ್ಲಿ ಹರಕಲು ಚಪ್ಪಲಿ, ಇಲ್ಲಾಂದ್ರೆ ಬರಿಗಾಲು. ಎರಡೋ ಮೂರೋ ಕಿಲೋಮೀಟರ್ ಕೆಸರು ದಾರೀಲಿ ನಡೀಬೇಕಿತ್ತು. ಚೀಲದಲ್ಲಿ ಒಂದು ಸ್ಲೇಟು, ಒಂದೆರಡು ಬಳಪ, ಸ್ಲೇಟ್ ಒರೆಸೋಕೆ ಮನೆ ಮುಂದೆ ಸಿಕ್ಕ ನೀರ್ ಕಡ್ಡಿನಾ ಕಿತ್ಕೊಂಡು ಇಟ್ಕೊತಾ, ಜೊತೆಗೆ ಒಂದೇ ಒಂದು ರಫ್ ನೋಟ್ ಬುಕ್. ಅದೇ ನಮ್ಮ ಆಸ್ತಿ.

➡️ಸ್ಕೂಲ್ ಅಂದ್ರೆ ಈಗಿನ ತರಹ ಕಾಂಕ್ರೀಟ್ ಬಿಲ್ಡಿಂಗ್ ಅಲ್ಲ. ಮಣ್ಣಿನ ಗೋಡೆ, ಹೆಂಚಿನ ಮಾಡು. ನೆಲಕ್ಕೆ ಸಗಣಿ ಸಾರಿಸಿರ್ತಿದ್ರು. ಕೂರೋಕೆ ಬೆಂಚ್ ಇರಲಿಲ್ಲ, ಮನೆಯಿಂದನೇ ಒಂದು ಹರಕಲು ಗೋಣಿಚೀಲ ಇಲ್ಲಾಂದ್ರೆ ಜಮಖಾನ ತಗೊಂಡು ಹೋಗಿ ನೆಲದ ಮೇಲೆ ಕೂರಬೇಕು. ಜೋರಾಗಿ ಮಳೆ ಬಂದ್ರೆ ಮಾಡಿನಿಂದ ನೀರು ತೊಟ್ಟಿಕ್ಕೋದು ಕಾಮನ್.

➡️ಇನ್ನು ನಮ್ಮ ಮೇಷ್ಟ್ರುಗಳು... ಈಗಿನ ತರಹ 'ಹಾಯ್ ಕಿಡ್ಸ್' ಅನ್ನೋರಿರಲಿಲ್ಲ. ಬಿಳಿ ಪಂಚೆ, ಶರ್ಟು ಇಲ್ಲಾಂದ್ರೆ ಪ್ಶರ್ಟ್ ಪ್ಯಾಂಟ್, ಪ್ಯಾಂಟ್ಗೆ ಬೆಲ್ಟ್ ಹೊಟ್ಟೆಗೆ ಸೇರಿಸಿ ಕಟ್ಕೋಕ್ತಾ ಇದ್ರು, ಕೈಲೊಂದು ಆಳೆತ್ತರದ ಬಿದಿರಿನ ಬೆತ್ತ ಹಿಡಿದು ಬಂದ್ರೆ, ಇಡೀ ಕ್ಲಾಸ್ ಪಿನ್ ಡ್ರಾಪ್ ಸೈಲೆನ್ಸ್! ಮೇಷ್ಟ್ರು ಬರೋದು ದೂರದಿಂದಲೇ ಗೊತ್ತಾಗಲಿ ಅಂತ ಬಾಗಿಲತ್ರ ಯಾರಿಗಾದ್ರೂ ಕಾವಲು ನಿಲ್ಲಿಸ್ತಿದ್ವಿ. ಮೇಷ್ಟ್ರು ಹೊಡಿತಿದ್ದ ಏಟು ಇದ್ಯಲ್ಲ, ಬೆನ್ನ ಮೇಲೆ ಬರೆ ಎಬ್ಬಿಸ್ತಿತ್ತು. ತಪ್ಪು ಮಾಡಿದ್ರೆ ಕಿವಿಗೆ ಹಿಂಡಿ, ಗೋಡೆಗೆ ಮುಖ ಮಾಡಿ ನಿಲ್ಲಿಸ್ತಿದ್ರು. ಆದ್ರೆ ಆ ಏಟಲ್ಲಿ ಯಾವತ್ತೂ ಸೇಡಿರಲಿಲ್ಲ. 'ನಮ್ಮೂರಲ್ಲಿ ಇವನೊಬ್ಬ ವಿದ್ಯಾವಂತ ಆಗ್ಲಿ, ದಾರಿ ತಪ್ಪದಿರಲಿ' ಅನ್ನೋ ಕಳಕಳಿ ಇತ್ತು. ಪಾಠ ಮಾಡ್ತಿದ್ರೆ ಸರಸ್ವತಿಯೇ ಬಂದು ಕೂತಂಗೆ ಇರ್ತಿತ್ತು. ಇವತ್ತಿಗೂ ನಾವು ನಾಲ್ಕು ಕಾಸು ಸಂಪಾದನೆ ಮಾಡಿ, ಸಮಾಜದಲ್ಲಿ ತಲೆ ಎತ್ತಿ ನೆಮ್ಮದಿಯಾಗಿದ್ದೀವಿ ಅಂದ್ರೆ ಅದು ಆ ಮಾಸ್ಟ್ರು ಕೊಟ್ಟ ಬೆತ್ತದ ಏಟಿನ ಪುಣ್ಯ ಕಣ್ರೀ .

➡️ಮಧ್ಯಾಹ್ನ ಬೆಲ್ ಹೊಡೆದ ತಕ್ಷಣ ಅಲ್ಯೂಮಿನಿಯಂ ಡಬ್ಬಿ ನಾ ಹಲ್ಲಲ್ಲೋ ಅಥವಾ ಗೋಡೆಗೆ ಹೊಡೆದು ಓಪನ್ ಮಾಡಿ . ಯಾರ್ಯಾರ ಮನೇಲಿ ಏನೇನು ತಂದಿದ್ರೋ ಎಲ್ಲರೂ ಹಂಚಿಕೊಂಡು ತಿನ್ನೋದು. ಆಮೇಲೆ ಸ್ಕೂಲ್ ಆವರಣದ ಮರ ಹತ್ತೋದು, ಗೋಲಿ ಆಡೋದು, ಕಣ್ಣಾಮುಚ್ಚಾಲೆ ಆಡೋದು. ಬಾಯಾರಿಕೆ ಆದ್ರೆ ಈಗಿನ ತರಹ ಫಿಲ್ಟರ್ ನೀರಿರಲಿಲ್ಲ, ನಲ್ಲಿಗೆ ಬಾಯಿ ಇಟ್ಟು ಇಲ್ಲ ಬೊಗಸೇಲಿ ನೀರು ಕುಡಿದ್ರೆ ಆಗ್ತಿದ್ದ ಖುಷಿನೇ ಬೇರೆ.

➡️ಬೆಳಗ್ಗೆ ಬಿಸಿ ಗಂಜಿ, ಮಿಡಿ ಉಪ್ಪಿನಕಾಯಿ, ಹಲಸಿನ ಹಪ್ಪಳ ತಿಂದ್ಬಿಟ್ಟು ಆಚೆ ಬಂದ್ರೆ, ಮಧ್ಯಾಹ್ನದ ಹೊತ್ತಿಗೆ ಮೈ ಸುಡೋ ಬಿಸಿಲು. ಅಡಿಕೆ ತೋಟ, ಕಾಫಿ ಗಿಡ, ಮೆಣಸಿನ ಬಳ್ಳಿ, ಎತ್ತರದ ತೆಂಗು, ಬಾಳೆ, ಹಲಸು, ಮಾವು... ಇವೆಲ್ಲದರ ಮಧ್ಯೆ ಇದ್ದ ನಮ್ಮ ಮಣ್ಣಿನ ಗೋಡೆಯ ಹೆಂಚಿನ ಮನೆ, ಉದ್ದನೆಯ ಜಗುಲಿ, ಮೇಲೊಂದು ಅಟ್ಟ. ಹಿಂಭಾಗದ ಕೊಟ್ಟಿಗೆಯಲ್ಲಿ ಹಸು, ಕರು, ಎತ್ತು, ಕೋಳಿಗಳದ್ದೇ ಒಂದು ಪ್ರಪಂಚ.ಬೇಸಿಗೆಯಲ್ಲಿ ದೊಡ್ಡವರ ತೋಟದ ಕೆಲಸದಲ್ಲಿ - ಅಡಿಕೆ ಸುಲಿಯೋದು, ಕಾಫಿ ಕೊಯ್ಲು, ಭತ್ತದ ಗದ್ದೆ ಕೊಯ್ಲು, ಭತ್ತ ಒಣಗಿಸೋದು, ಕೊಟ್ಟಿಗೆಗೆ ಹುಲ್ಲು ತುಂಬೋದರಲ್ಲಿ ಮನೆಯವರೆಲ್ಲಾ ಒಂದಾಗಿ ಕೈ ಜೋಡಿಸ್ತಿದ್ವಿ.ಆಗೆಲ್ಲಾ ಹತ್ತಿರದ ಪಟ್ಟಣಕ್ಕೆ ದೊಡ್ಡ ಶಾಪಿಂಗ್ ಅಂದ್ರೆ ವಾರದ ಸಂತೆ. ಹೋಗೋಕೆ ಎತ್ತಿನ ಗಾಡಿ, ಇಲ್ಲಾ ಸೈಕಲ್. ಗಂಟೆಗಟ್ಟಲೆ ಬಸ್ಸಿಗಾಗಿ ಕಾಯೋದು. ಮನೇಲಿ ಅಜ್ಜ-ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಒಂದೇ ಮನೇಲಿ ಜೀವನ. ಊಟಕ್ಕೆ ಕೂತ್ರೆ ಕಡುಬು, ನೀರು ದೋಸೆ, ಅಕ್ಕಿ ರೊಟ್ಟಿ, ಸೊಪ್ಪಿನ ಪಲ್ಯ, ಹಲಸಿನ ಕಾಯಿ, ಬಿದಿರಿನ ಕಳಲೆ, ಕಣಿಲೆ, ಕೆಸುವಿನ ಸೊಪ್ಪು, ತಂಬಳಿ ಜೊತೆಗೆ ಮನೇಲೇ ಕಡೆದ ಮಜ್ಜಿಗೆ. ಮಧ್ಯಾಹ್ನ ಜಗುಲಿಯಲ್ಲಿ ಕೂತು ಮರ್ಫಿ ರೇಡಿಯೋದಲ್ಲಿ 'ವಿವಿಧ ಭಾರತಿ', ಕನ್ನಡ ಸಿನಿಮಾ ಹಾಡುಗಳು, ಇಲ್ಲಾ ಕ್ರಿಕೆಟ್ ಕಾಮೆಂಟರಿ ಕೇಳ್ತಾ, ಪಕ್ಕದ ಮನೆ ನೆಂಟರು ಬಂದ್ರೆ ಮನೇಲೇ ಊಟ. ನೆಂಟರ ಊರಿಗೆ ಹೋಗಬೇಕು ಅಂದ್ರೆ ಸಂಬಂಧಿಕರ ಮದುವೆ ಇರಬೇಕಿತ್ತು ಅಥವಾ ಯಾರಾದರೂ ಸಾಯಬೇಕಿತ್ತು! ಜಾತ್ರೆ ಬಂದ್ರೆ ಯಕ್ಷಗಾನ, ಹರಿಕಥೆ, ಭಜನೆ, ಕೋಲಾಟ, ತಾಳಮದ್ದಳೆ. ಊರಿಗೆ ಊರೇ ಒಂದು ಫ್ಯಾಮಿಲಿ ತರ ಇತ್ತು.

➡️ಈಗಿನ ತರಹ 'ವೀಕೆಂಡ್ ಬಂತು ರಿಲ್ಯಾಕ್ಸ್ ಆಗೋಣ', 'ವರ್ಕ್ ಪ್ರೆಷರ್ ಜಾಸ್ತಿ ಆಗ್ತಿದೆ' ಅನ್ನೋ ಡೈಲಾಗ್ ಆ 80ರ ದಶಕದ ಅಪ್ಪಂದಿರಿಗೆ ಗೊತ್ತೇ ಇರಲಿಲ್ಲ. ಅಪ್ಪನಿಗೆ ಲೈಫ್ ಅಂದ್ರೆ ಅದು ಬರೀ ಜವಾಬ್ದಾರಿ. ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನವೇ ಎದ್ದು, ಹಟ್ಟಿಯ ಕೆಲಸ ಮುಗಿಸಿ, ಮೈಗೆ ಒಂದು ಹಳೇ ಶರ್ಟು, ಕಾಲಿಗೆ ಸವೆದು ಹೋದ ಚಪ್ಪಲಿ ಹಾಕಿಕೊಂಡು ತೋಟದ ಕಡೆಗೆ ಹೆಜ್ಜೆ ಹಾಕ್ತಿದ್ರು. ಮಲೆನಾಡಿನ ಹುಚ್ಚು ಮಳೆಗೆ, ತಲೆಗೊಂದು ಪ್ಲಾಸ್ಟಿಕ್ ಚೀಲ ಇಲ್ಲ ಅಡಿಕೆ ಹಾಳೆಯ ಗೊರಬೆ ಹೊದ್ದು ಕೆಸರಿನಲ್ಲಿ ದುಡಿತಿದ್ದ ಆ ಅಪ್ಪನ ಮೈಯಿಂದ ಬರ್ತಿದ್ದ ಬೆವರಿನ ವಾಸನೆಗೆ ಯಾವ ಪರ್ಫ್ಯೂಮ್ ಕೂಡ ಸಾಟಿಯಿಲ್ಲ. ಶರ್ಟಿನ ಕಾಲರ್ ಹರಿದಿದ್ರೂ ತನಗೆ ಹೊಸ ಬಟ್ಟೆ ತಗೊಳ್ಳದೆ, ಹಬ್ಬಕ್ಕೆ ಮಕ್ಕಳಿಗೆ ಹೊಸ ಬಟ್ಟೆ ತರೋ ಆ ತ್ಯಾಗ ಇದ್ಯಲ್ಲ... ಅದು ಆ ಕಾಲದ ಅಪ್ಪನಿಗೆ ಮಾತ್ರ ಕರಗತವಾಗಿತ್ತು. ಸಂಜೆ ಮನೆಗೆ ಬಂದು ಸುಸ್ತಾಗಿ ಕೂತಾಗ, ನಾವು ತಿಂದ್ವಾ ಅಂತ ಕೇಳಿ ನಗ್ತಿದ್ದ ಆ ನಗುವಿನಲ್ಲಿ ಜಗತ್ತಿನ ಎಲ್ಲ ಟೆನ್ಷನ್ ಮರೆತುಹೋಗ್ತಿತ್ತು.

➡️ಅಮ್ಮನ ಪ್ರಪಂಚ ಅಂದ್ರೆ ಆ ಸೌದೆ ಒಲೆ, ಮಸಿ ಹಿಡಿದ ಪಾತ್ರೆಗಳು, ಮತ್ತೆ ನಾವು. ಬೆಳಗಿನಿಂದ ರಾತ್ರಿವರೆಗೂ ಆ ಹೊಗೆಯಲ್ಲೇ ಕಣ್ಣೀರು ಹಾಕುತ್ತಾ ಅಡುಗೆ ಮಾಡ್ತಿದ್ಲು. ಎಲ್ಲರಿಗೂ ಬಡಿಸಿ, ಕೊನೆಗೆ ಪಾತ್ರೆಯ ತಳದಲ್ಲಿ ಉಳಿದಿದ್ದ ಸೀದು ಹೋದ ರೊಟ್ಟಿಯೋ, ಗಂಜಿಯೋ, ಅನ್ನವೋ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ನಮಗೆ ಜ್ವರ ಬಂದ್ರೆ ಈಗಿನ ತರಹ ಅಪೋಲೋ ಆಸ್ಪತ್ರೆಗೆ ಓಡ್ತಿರಲಿಲ್ಲ. ಅಮ್ಮನ ಕೈಯಲ್ಲೇ ಒಂದು ಮ್ಯಾಜಿಕ್ ಇತ್ತು ಸಾರ್ ! ಯಾವುದೋ ಸೊಪ್ಪು ತಂದು ರಸ ತೆಗೆದು ಕುಡಿಸಿದರೆ ಜ್ವರ ಮಾಯ. ಕಾಲಿಗೆ ಪೆಟ್ಟಾದ್ರೆ, ಅರಿಶಿನ ಪುಡಿ ಹಚ್ಚಿ ತನ್ನ ಹಳೇ ಸೀರೆಯ ಬಟ್ಟೆ ಹರಿದು ಕಟ್ಟು ಕಟ್ಟುತ್ತಿದ್ದಳು. ಅಕ್ಕಿ ಡಬ್ಬದ ಒಳಗೆ, ಇಲ್ಲಾಂದ್ರೆ ಸೆರಗಿನ ಗಂಟಲ್ಲಿ ಆಗಾಗ್ಗೆ ಐದು , 10 ರೂಪಾಯಿ ಕೂಡಿಟ್ಟು, ಕಷ್ಟ ಬಂದಾಗ ತೆಗೆದು ಕೊಡ್ತಿದ್ಲಲ್ಲ... ಆ ಅಮ್ಮನ ಕಾಳಜಿಗೆ ಪ್ರಪಂಚದ ಯಾವ ಬ್ಯಾಂಕ್ ಬ್ಯಾಲೆನ್ಸೂ ಸರಿಸಮಾನವಲ್ಲ.

➡️ಮನೇಲಿ ನಾವು ತಪ್ಪು ಮಾಡಿದಾಗ ಅಪ್ಪನ ಬೆತ್ತದ ಏಟಿನಿಂದ ನಮ್ಮನ್ನ ಕಾಪಾಡೋ ಸುಪ್ರೀಂ ಕೋರ್ಟ್ ಅಂದ್ರೆ ಅದು ಅಜ್ಜಿ ಅಥವಾ ಅಜ್ಜ! ಅಪ್ಪ ರೇಗಾಡಿದಾಗ, ಅಜ್ಜಿಯ /ಅಜ್ಜನ ಬೆನ್ನ ಹಿಂದೆ ಅಡಗಿಕೊಳ್ಳೋ ಮಜಾನೇ ಬೇರೆ. ಅಜ್ಜಿಯ ಹತ್ತಿರ ಹೋದರೆ ವಿಭೂತಿ, ಕರ್ಪೂರ ಮತ್ತೆ ಆ ಅಡಿಕೆ-ಎಲೆಯ ಘಮಲು. ಅಜ್ಜಿ ಹಾಕೋ ಎಲೆ ಅಡಿಕೆ ಕೆಂಪಗೆ ಆಗ್ತಿತ್ತಲ್ಲ, ಆ ಬಣ್ಣ ಈಗಿನ ಯಾವ ಕಾಸ್ಟ್ಲಿ ಲಿಪ್ ಸ್ಟಿಕ್ ಗೂ ಬರಲ್ಲ. ರಾತ್ರಿ ಲ್ಯಾಂಟರ್ನ್ ಬೆಳಕಲ್ಲಿ ಊಟ ಆದ್ಮೇಲೆ, ಅಜ್ಜಿಯ ಪಕ್ಕ ಮಲಗಿಕೊಂಡು ರಾಜ-ರಾಣಿ, ಕಾಡು-ಮೃಗಗಳ ಕಥೆ, ದೆವ್ವದ ಕಥೆ ಕೇಳ್ತಾ ಇದ್ರೆ ನಿದ್ದೆ ಬರೋದೇ ಗೊತ್ತಾಗ್ತಿರಲಿಲ್ಲ. ಯಾರೂ ನೋಡದ ಹಾಗೆ ಕದ್ದು, ನಮ್ಮ ಕೈಗೆ ಒಂದು ತುಂಡು ಬೆಲ್ಲವೋ, ಇಲ್ಲಾ ಐದು-ಹತ್ತು ಪೈಸೆಯ ಕಾಯಿನ್ ಇಡ್ತಿದ್ಲಲ್ಲ... ಅವತ್ತು ನಾವೇ ಜಗತ್ತಿನ ಶ್ರೀಮಂತರು!

➡️ಸಂಜೆ ಆಗ್ತಾ ಆಗ್ತಾ ಶುರುವಾಗುತ್ತೆ ನೋಡಿ ಮಲೆನಾಡಿನ ಹುಚ್ಚು ಮಳೆ! ಹೆಂಚಿನ ಮೇಲೆ 'ಢಣ್ ಢಣ್' ಅಂತ ಮಳೆಯ ಸದ್ದು. ಕೆಸರು ದಾರೀಲಿ, ಹೊಳೆ-ಹಳ್ಳ ತುಂಬಿ ಹರಿಯುವಾಗ ಆ ಹಳೆ ಸೇತುವೆ ದಾಟೋ ಭಯ ಇದ್ಯಲ್ಲ... ಕಾಲಿಗೆ ಕಚ್ಚೋ ಜಿಗಣೆಗೆ ಉಪ್ಪು ಹಾಕಿ ಕೀಳೋದು. ಒದ್ದೆಯಾದ ಚಪ್ಪಲಿ, ಶಾಲಾ ಪುಸ್ತಕಗಳನ್ನ, ಒದ್ದೆ ಕಟ್ಟಿಗೆಯನ್ನ ಒಲೆ ಮುಂದೆ ಇಟ್ಟು ಒಣಗಿಸೋ ಸಾಹಸ.ರಾತ್ರಿ ಕರೆಂಟ್ ಹೋಗೋದು ಗ್ಯಾರಂಟಿ. ಆಗ ಸೀಮೆಎಣ್ಣೆ ದೀಪ, ಲ್ಯಾಂಟರ್ನ್ ಬೆಳಕಲ್ಲೇ ಊಟ. ಮಳೆಗಾಲದ ಚಳಿಗೆ ಕಾಡು ಸೊಪ್ಪು, ಋತುವಿನಲ್ಲಿ ಸಿಗೋ ಅಣಬೆ ಸಾರು, ಒಣಗಿಸಿದ ತರಕಾರಿ, ಹಪ್ಪಳ-ಸಂಡಿಗೆ, ಒಣಮೆಣಸಿನಕಾಯಿಯ ಊಟ. ರೇಡಿಯೋ ಸುತ್ತ ಇಡೀ ಫ್ಯಾಮಿಲಿ ಕೂತಿರ್ತಿತ್ತು. ಜಗುಲಿಯಲ್ಲಿ ಕೂತು ಅಜ್ಜ-ಅಜ್ಜಿ ಹೇಳೋ ದೆವ್ವ-ಭೂತದ ಕಥೆ ಕೇಳ್ತಾ ಇದ್ರೆ, ಹೊರಗಡೆ ಕಪ್ಪೆಗಳ, ಜೀರುಂಡೆಗಳ 'ಗುಯ್' ಅನ್ನೋ ಸದ್ದು. ಆ ಮಳೆಯ ಸದ್ದಿಗೆ, ಎಲ್ಲರೂ ಒಟ್ಟಿಗೆ ಮಲಗಿದ್ರೆ ಬರೋ ನೆಮ್ಮದಿಯ ನಿದ್ದೆ, ಇದೆ ಅಲ್ವಾ ಪಕ್ಕದಲ್ಲಿ ಆನೆ ಬಂದ್ರು ಎಚ್ಚರ ಆಗ್ತಾ ಇರ್ಲಿಲ್ಲ!

➡️ಆಗೆಲ್ಲ ನಮಗೆ 'ಇಲ್ಲ' ಅನ್ನೋ ಕೊರಗು ಇರಲಿಲ್ಲ, 'ಇನ್ನೇನೋ ಬೇಕು' ಅನ್ನೋ ದುರಾಸೆ ಇರಲಿಲ್ಲ. ಇದ್ದಿದ್ದರಲ್ಲೇ ಖುಷಿ ಪಡೋದು, ಎಲ್ಲರನ್ನೂ ಪ್ರೀತಿಸೋದು ಗೊತ್ತಿತ್ತು. ಈಗ ಸಿಕ್ಕಿದ್ದೆಲ್ಲ ಸಿಗುತ್ತಿದೆ, ಬೇಕಾದದ್ದೆಲ್ಲ ಖರೀದಿಸುವ ಆಸೆ ಹೆಚ್ಚಿದೆ. ಬದುಕು ಬರೀ EMI ನಲ್ಲೇ ಮುಳುಗಿ ಹೋಗಿದೆ. ನೀವೇ ಹೇಳಿ... ಈ ದುಡ್ಡಿನ ಆಸೆಗೆ, ಫಾಸ್ಟ್ ಲೈಫ್ ಗೆ ಬಿದ್ದು ಎಷ್ಟು ಜನ ಊರು ಬಿಟ್ರು? ತಾತ-ಮುತ್ತಾತ ಬೆವರು ಸುರಿಸಿ ಮಾಡಿದ್ದ ಹೊಲ, ಮನೆ ಮಾರಿ ಸಿಟಿಗೆ ಬಂದು ಸೆಟಲ್ ಆದ್ರು? ಎಲ್ಲೋ ಮೂಲೇಲಿ ಇರೋ ಫ್ಲಾಟ್ ನಲ್ಲಿ ಕೂತು ಇದೆಲ್ಲಾ ನೆನಪಾದ್ರೆ ಸುಮ್ನೆ ಕಣ್ಣಾಲಿಗಳು ತುಂಬಿ ಬರುತ್ತವೆ ಅಲ್ವಾ? ಇದೆಲ್ಲ ನನಗೆ ನನ್ನ ಅಜ್ಜಿ! ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಹೇಳಿದ ಅವರ ಕಥೆಗಳು! ಸಾಧ್ಯ ಆದ್ರೇ ನಿಮ್ಮ ನೆನಪುಗಳನ್ನೂ ಹಂಚಿಕೊಳ್ಳಿ! ಕಾಮೆಂಟ್ ಬಾಕ್ಸ್ ನಿಮ್ಮದೇ!
ಬರಹ : J P Nair

Fujifilm Instax Mini 13 Camera: ಚಕಾಚಕ್ ಫೋಟೊ ಮುದ್ರಿಸಿ ಸ್ನೇಹಿತರಿಗೆ ಸರ್‌ಪ್ರೈಸ್ ಕೊಡಿ!Fujifilm Instax Mini 13 Camera: ಫೋಟೋ ತೆ...
12/09/2026

Fujifilm Instax Mini 13 Camera: ಚಕಾಚಕ್ ಫೋಟೊ ಮುದ್ರಿಸಿ ಸ್ನೇಹಿತರಿಗೆ ಸರ್‌ಪ್ರೈಸ್ ಕೊಡಿ!

Fujifilm Instax Mini 13 Camera: ಫೋಟೋ ತೆಗೆದಾಕ್ಷಣವೇ ಮುದ್ರಿತ ಚಿತ್ರ ಕೈಗೆ ಬರುತ್ತದೆ. ಅದನ್ನೇ ಮದುವೆ, ಪಾರ್ಟಿ, ಪ್ರವಾಸದಲ್ಲಿರುವಾಗ ಗಿಫ್ಟ್ ಕೊಡಿ, ಮಧುರ ಕ್ಷಣಗಳ ಖುಷಿಯಲ್ಲಿ ಭಾಗಿಯಾಗಿ......

Fujifilm Instax Mini 13 Camera: ಫೋಟೋ ತೆಗೆದಾಕ್ಷಣವೇ ಅದರ ಪ್ರಿಂಟ್ ಹಾಕಿಸಿ ಸ್ನೇಹಿತರ ಮಧುರ ಕ್ಷಣಗಳಿಗೆ ಹೊಸ ಹೊಳಪು ನೀಡಿ. ಇದರ ಪೂರ್ಣ ವಿವರ: DiGiKannada.com

11/09/2026
VRL 300 ಕೋಟಿ ಡೀಲ್, 150 ಲಕ್ಸುರಿ ಬಸ್ಸುಗಳು...ವಿಆರ್‌ಎಲ್ ಸಂಸ್ಥೆಯು 150 ಪ್ರೀಮಿಯಂ ಬಸ್‌ಗಳನ್ನು ಪರಿಚಯಿಸಿದ್ದು, ದೊಡ್ಡ ಸುದ್ದಿಯಾಗಿದೆ. 3...
11/09/2026

VRL 300 ಕೋಟಿ ಡೀಲ್, 150 ಲಕ್ಸುರಿ ಬಸ್ಸುಗಳು...

ವಿಆರ್‌ಎಲ್ ಸಂಸ್ಥೆಯು 150 ಪ್ರೀಮಿಯಂ ಬಸ್‌ಗಳನ್ನು ಪರಿಚಯಿಸಿದ್ದು, ದೊಡ್ಡ ಸುದ್ದಿಯಾಗಿದೆ. 300 ಕೋಟಿ ರೂ. ವೆಚ್ಚ. ಅಂದರೆ ಒಂದು ಬಸ್ ಬೆಲೆ ₹2 ಕೋಟಿ.
ಇದರಲ್ಲೇನು ವಿಶೇಷಗಳು?
ಒಳಗೇ ಟಾಯ್ಲೆಟ್ ಇದೆ
ಫುಲ್ ಎಸಿ
ಚಾರ್ಜಿಂಗ್ ಪಾಯಿಂಟ್ಸ್
ಆರಾಮದಾಯಕ ಹಾಸಿಗೆ
ಸಿಸಿಟಿವಿ
ವೆಂಟಿಲೇಟೆಡ್, ಆರಾಮದಾಯಕ ಸೀಟುಗಳು

Address

Bangalore

Alerts

Be the first to know and let us send you an email when DigiKannada posts news and promotions. Your email address will not be used for any other purpose, and you can unsubscribe at any time.

Contact The Business

Send a message to DigiKannada:

Shortcuts

Share