14/05/2025
Prof S Balachandra Rao, a mathematics teacher and former Principal of the National College at Basavanagudi, passed away today morning in Bangalore. He was formerly the Director of Gandhi Centre of Science and Human Values at the Bharatiya Vidya Bhavan.
Prof Rao is a widely read author and scholar on mathematics, scientific thinking and rationality, and published several books on history of mathematics, and debunking astrology in Kannada and in English.
In his illustrious career as a teacher and scholar, Prof Rao foregrounded critical thinking and scholarship in elucidating history (of mathematics in particular) and engaging with science without giving in to sensationalism.
BGVS recalls the decades of fond memories of his association with BGVS and people's science movement and expresses its deep condolences to his family and kin, and his students and readers. His departure would be a dearly felt by all who work towards building a society based on the spirit of scientific enquiry, compassion and humane values.
ಗಣಿತ ಪ್ರಾಧ್ಯಾಪಕರೂ, ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದ ಪ್ರೊ. ಬಾಲಚಂದ್ರ ರಾವ್ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳೆದರು.ಅವರು ಈ ಹಿಂದೆ ಭಾರತೀಯ ವಿದ್ಯಾ ಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳಿಗಾಗಿ ಗಾಂಧಿ ಕೇಂದ್ರ (Gandhi Centre of Science and Human Values) ದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಗಣಿತಶಾಸ್ತ್ರ ಮತ್ತು ವೈಜ್ಞಾನಿಕ ದೃಷ್ಟಿಕೋನದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅವರು ಬರೆದಿದ್ದ ಪುಸ್ತಕಗಳು ಜನಪ್ರಿಯವಾಗಿದ್ದವು.
ಅಲ್ಲದೇ, ಗಣಿತದ ಇತಿಹಾಸ ಮತ್ತು ಜೋತಿಷ್ಯದ ಪೊಳ್ಳುತನದ ಬಗ್ಗೆಯೂ ಅವರು ಬರೆದಿದ್ದ ಇಂಗ್ಲಿಷ್ ಮತ್ತು ಕನ್ನಡದ ಪುಸ್ತಕಗಳು ಜನಮಾನಸವನ್ನು ತಲುಪಿ ವೈಜ್ಞಾನಿಕ ದೃಷ್ಟಿಕೋನವನ್ನು ಬಿತ್ತಿದ್ದವು.
ಶಿಕ್ಷಕರಾಗಿ ಮತ್ತು ವಿದ್ವಾಂಸರಾಗಿ ಮೇರು ಸಾಧನೆಗೈದಿದ್ದ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಎಲ್ಲವನ್ನೂ ಪ್ರಶ್ನಿಸಿ, ವಿಮರ್ಶಿಸಿ ಮತ್ತು ಅಧ್ಯಯನಗಳನ್ನು ಕೈಗೊಳ್ಳುವ ಮೂಲಕ ಇತಿಹಾಸ (ಅದರಲ್ಲೂ ಮುಖ್ಯವಾಗಿ, ಗಣತದ ಇತಿಹಾಸ) ಹಾಗೂ ವಿಜ್ಞಾನವನ್ನು ಅತಿಶಯೋಕ್ತಿ ಮತ್ತು ನಾಟಕೀಯತೆಯಿಂದ ಕಾಪಿಡಲು ಶ್ರಮಿಸಿದರು.
ಭಾರತ ಜ್ಞಾನವಿಜ್ಞಾನ ಸಮಿತಿಯು ಅವರ ಕುಟುಂಬಕ್ಕೂ ಅವರಿಗಿದ್ದ ಅಪಾರ ವಿದ್ಯಾರ್ಥಿ ಮತ್ತು ಓದುಗ ಬಳಗಕ್ಕೂ ಈ ಮೂಲಕ ಸಂತಾಪ ಸೂಚಿಸಿತ್ತಾ, ಅವರ ಅಗಲಿಕೆಯನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಆಶಿಸುತ್ತೇವೆ. ವೈಜ್ಞಾನಿಕ ಮನೋಭಾವ, ಕಾರುಣ್ಯ ಮತ್ತು ಮಾನವೀಯ ಮೌಲ್ಯಾಧಾರಿತ ಸಮಾಜವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಇದು ತುಂಬಲಾರದ ನಷ್ಟವೇ ಆಗಿದೆ.