08/03/2018
ಮುದ್ದಿನ ಮಗಳಾಗುವ
ಹರುಷದ ಹೊನಲಾಗುವ
ಒಡಹುಟ್ಟಿದವರ ಕಣ್ಣಾಗುವ
ವಾತ್ಸಲ್ಯದ ಮೂರ್ತಿಯಾಗುವ
ಬಾ0ಧವ್ಯಕೆ ಸೇತುವಾಗುವ
ಒಲವಿನ ಸೆಲೆಯಾಗುವ
ಪ್ರೀತಿಯ ನೆಲೆಯಾಗುವ
ಬದುಕಿಗೆ ಜೊತೆಯಾಗುವ
ಜನನಕೆ ಬಸಿರಾಗುವ
ಮಮತೆಯ ಮಡಿಲಾಗುವ
ಕರುಣೆಯ ಕಡಲಾಗುವ
ಹೊತ್ತು ಹೊತ್ತಿಗೆ ತುತ್ತಾಕುವ
ಮುನ್ನಡೆಗೆ ದಿಕ್ಕಾಗುವ
ಆಸರೆಯ ತೊಟ್ಟಿಲಾಗುವ
ಕತ್ತಲೆಗೆ ಬೆಳಕಾಗುವ
ನೋವ ನು0ಗಿಯೂ ನಗುವ
ಒಪ್ಪಿಗೆ ಮಣಿವ , ತಪ್ಪಿಗೆ
ಮುನಿದು ಸಿಡಿಯವ , ಸದಾ
ತ್ಯಾಗದ ಮೂರ್ತಿಯಾಗುವ
ಈ ಭುವಿಯ ಬಹುರೂಪಿ
"ಅದ್ಭುತ" ಸೃಷ್ಠಿಯೇ ಹೆಣ್ಣು ,.......
ಮಹಿಳಾ ದಿನದ ಶುಭ ಹಾರೈಕೆಗಳು .😍😍🙏🏻